pilinalike ಮಿಥುನ್ ರೈ ವೇದಿಕೆಗೆ ಬಿಜೆಪಿ ದಂಡು: ರೈಟ್- ಲೆಫ್ಟ್ ಎಲ್ಲ ಸುಳ್ಳು!
Monday, October 14, 2024
ಕುಡ್ಲ ಪಾಲಿಟಿಕ್ಸ್: ಮಂಗಳೂರಿನಲ್ಲಿ ಕಾಂಗ್ರೆಸ್ ಮುಖಂಡ ಮಿಥುನ್ ರೈ ನೇತೃತ್ವದ "ಪಿಲಿನಲಿಕೆ" ಎಂಬ ಅದ್ಧೂರಿ ಹುಲಿವೇಷ ಸ್ಪರ್ಧೆಗೆ ಬಂದು ಮಿಥುನ್ ರೈ ಅವರನ್ನು ಹಾಡಿ ಹೊಗಳಿದ ಬಿಜೆಪಿ ಮುಖಂಡರು.
ಒಬ್ಬರು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮತ್ತೊಬ್ಬರು ಸಂಸದ ಕ್ಯಾ.ಬ್ರಿಜೇಶ್ ಚೌಟ. ಜತೆಗೆ ಕುಡ್ಲದ ಭಾವಿ ಎಂಎಲ್ಎ ಎಂದೇ ಬಿಂಬಿತ ನಂದನ್ ಮಲ್ಯ!
ಇನ್ನೂ ಹಲವರು ಕಾಂಗ್ರೆಸ್‌ನ ಈ ಮುಖಂಡರ ವೇದಿಕೆಗೆ ಬಂದರು. ಘಟನೆಯಾಗಿ 2-3 ದಿನಗಳೇ ಕಳೆದಿವೆ.

ಈಗ ಬಿಜೆಪಿ ವರ್ತುಲದಲ್ಲೇ ಬಿಜೆಪಿ ಮುಖಂಡರಿಗೆ ಕಾರ್ಯಕರ್ತರು ಹಿಡಿಶಾಪ ಹಾಕ್ತಿದ್ದಾರೆ. ಇದು ಈಗಿನ ಸುದ್ದಿ. ಆದರೆ ಇದು ಕೂಡ ಹಳಸಿದ ಸುದ್ದಿಯೇ!
ಕಲ್ಲಡ್ಕದ ಭಟ್ಟರು ಮತ್ತು ಖಾದರ್ ಆತ್ಮೀಯತೆ, ನಳಿನಣ್ಣಗೆ ಬ್ಯಾರಿ ಕುಬೇರರ ನಂಟು- ಪ್ರೀತಿಯ ಸನ್ಮಾನ, ಅಷ್ಟೇ ಏಕೆ? ಬಿಜೆಪಿ ಆಡಳಿತದ ಮಂಗಳೂರು ಮಹಾನಗರ ಪಾಲಿಕೆಯ ಬಹುತೇಕ ಕಾಮಗಾರಿ ಗುತ್ತಿಗೆ ಅನ್ಯ(?) ಧರ್ಮೀಯರದ್ದೇ. ಹೊರಗೆ ಹೊಡೆದಾಟ, ಒಳಗೆ ಮುದ್ದಾಟ.
ಸುದ್ದಿಯಾದರೂ, ಆಗದೆ ಇದ್ದರೂ ಇಂಥ ಸಹಸ್ರಾರು ಘಟನೆಗಳು ಹಿಂದೆಯೂ ನಡೆದಿವೆ. ಈಗಲೂ ನಡೆಯುತ್ತಲೇ ಇದೆ.
ನಿಜವಾದ ಸಹಬಾಳ್ವೆ ಎಂದರೆ ಅದು. ಇದನ್ನು ನಾಯಕರು ಹಿಂದೆಯೂ, ಈಗಲೂ, ಮುಂದೆಯೂ ಅನುಸರಿಸುತ್ತಾರೆ. ಅದೇ ನಿಜವಾದ ಮನುಷ್ಯ ಧರ್ಮ. ಅದೇ ವಾಸ್ತವದ ಸಿದ್ಧಾಂತ.
ಬದುಕಿಗೆ, ಜೀವನಕ್ಕೆ ಹತ್ತಿರವಾಗಿರೋದೆ ನಿಜವಾದ ಸಿದ್ಧಾಂತ. ಉಳಿದೆಲ್ಲವೂ ಜೊಳ್ಳು. ಪುಸ್ತಕದ ಬದನೆಕಾಯಿ.
ನಾಯಕರು ಬದಲಾಗಿಲ್ಲ. ಬದಲಾಗಬೇಕಾಗಿಯೂ ಇಲ್ಲ. ಆಗುವುದೂ ಇಲ್ಲ. ಬದಲಾಗಬೇಕಿರುವುದು ಹೊರಗಿನ ಜಗತ್ತಲ್ಲ, ಬದಲಾಗಿ ನಾನು!
ಮಾನವನಾದವನಿಗೆ ಮಾನವನಿಗಿಂತ ಮೇಲು ಧರ್ಮ ಇಲ್ಲ. ಕೀಳೂ ಇಲ್ಲ. "ಇದೆ" ಅಂತ ನೀವೆಂದರೆ, ಅಲ್ಲಿರೋದು ಕೇವಲ "ಪಾಲಿಟಿಕ್ಸ್"!