canara highschool ಮಂಗಳೂರಿನ ಕೆನರಾ ಹೈಸ್ಕೂಲ್ ಜಾಗ ವಕ್ಫ್ ಆಸ್ತಿ!?
Sunday, March 2, 2025
ಕುಡ್ಲ ಪಾಲಿಟಿಕ್ಸ್: ಮಂಗಳೂರಿನ ಕೆನರಾ ಹೈಸ್ಕೂಲ್‌ನ 1.10 ಎಕರೆ ಜಾಗವು ನೋಂದಾಯಿತ ವಕ್ಫ್ ಆಸ್ತಿ ಎಂದು ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಶಾಫಿ ಸಅದಿ ಹೇಳಿದ್ದಾರೆ.
ಮಂಗಳೂರಿನಲ್ಲಿ ದ.ಕ. ಜಿಲ್ಲೆಯ ಇಬ್ಬರು ಪ್ರಮುಖ ಖಾಜಿಗಳು ಹಾಗೂ ಉಲಮಾಗಳ ಎದುರಲ್ಲಿ ಅವರು ಈ ಸ್ಟೇಟ್ ಮೆಂಟ್ ನೀಡಿದ್ದಾರೆ.
ವಕ್ಫ್ ಆಸ್ತಿ ತಿದ್ದುಪಡಿ ವಿರುದ್ಧ ಸಮುದಾಯದ ಅಭಿಪ್ರಾಯ ತಿಳಿಸಲು ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂದರಿನ ಕಚ್ಚಿ ಮೆಮನ್ ಮಸೀದಿ ಅಧೀನದ 1.10 ಎಕರೆ ಜಾಗವನ್ನು ನೂರು ವರ್ಷಗಳ ಲೀಸಿಗೆ ಕೆನರಾ ಹೈಸ್ಕೂಲಿಗೆ ಕೊಡಲಾಗಿತ್ತು. 12 ವರ್ಷಗಳ ಹಿಂದಿನವರೆಗೂ ಕರಾರಿನಂತೆ ವಾರ್ಷಿಕ 100 ರುಪಾಯಿ ಬಾಡಿಗೆ ಕಟ್ಟುತ್ತಿದ್ದರು. ಆದರೆ 12 ವರ್ಷಗಳಿಂದ ಇವರು ಬಾಡಿಗೆ ಕಟ್ಟುತ್ತಿಲ್ಲ. ಕಚ್ಚಿ ಮೆಮನ್ ಮಸೀದಿಯ ಅಂದಿನ ಮುತವಲ್ಲಿ ಈ ಜಮೀನನ್ನು ಲೀಸಿಗೆ ಕೊಟ್ಟಿದ್ದರು ಎಂದು ಹೇಳಿದ್ದಾರೆ.
ಮಳಲಿ ಮಸೀದಿಯಲ್ಲಿ ದೇವಾಲಯದ ಕುರುಹುಗಳಿದ್ದವು ಎನ್ನುವ ಈ ಹೊತ್ತಿನಲ್ಲಿ ನಾವು ಕೆನರಾ ಹೈಸ್ಕೂಲ್ ಜಾಗ ವಕ್ಫ್ ಆಸ್ತಿ, ಅದನ್ನು ಬಿಟ್ಟುಕೊಡಿ ಎಂದರೆ ಏನಾದೀತು ಎಂದು ಶಾಫಿ ಸಾದಿ ಪ್ರಶ್ನಿಸಿದ್ದಾರೆ.