
ರಾಜಕೀಯದ ನೆರಳಿಗೆ ಬಂತು ಮಂಗಳೂರು ದಸರಾ!
Sunday, October 13, 2024
ಕೇರಳದಲ್ಲಿ ಸಾಮರಸ್ಯದ ಬೀಜ ಬಿತ್ತಿ ಹೆಮ್ಮರವಾಗಿಸಿ, ಕುದ್ರೋಳಿಗೆ ಬಂದು ಗೋಕರ್ಣನಾಥನನ್ನು ಪ್ರತಿಷ್ಠಾಪಿಸಿದರು.
ಅಂದು ದೇವಾಲಯಗಳಿಗೆ ಪ್ರವೇಶವಿಲ್ಲದ ಸಮುದಾಯದ ಜನರಿಗೆ- ಕೈಯಾರೆ ಮುಟ್ಟಿ ಹೃದಯಲ್ಲಿ ದೇಗುಲ ಕಟ್ಟಲು ದೇವರನ್ನು ಕರುಣಿಸಿದರು.
ಅದೇ ಕುದ್ರೋಳಿ ಕ್ಷೇತ್ರ ಇಂದು ರಾಜಕೀಯವಾಗಿ ವಿಶಾಲ ಆಲದ ಮರವಾಗಿದೆ. ಆ ಮರದ ನೆರಳಲ್ಲಿ ಮಂಗಳೂರು ದಸರಾ ನಡೆಯುತ್ತಿದೆ.
ಅಂದು ಮುಟ್ಟದವರು ಈಗ ಮುಟ್ಟಿಸಿಕೊಳ್ಳುತ್ತಿದ್ದಾರೆ.
ಈಗ ಚುನಾವಣೆ ಬಂತೆಂದರೆ "ಕುಡ್ಲ ಪಾಲಿಟಿಕ್ಸ್" ಆರಂಭ ಆಗೋದೆ ಕುದ್ರೋಳಿಯಿಂದ. ಅಲ್ಲೀಗ ಎಡವೂ ಇದೆ, ಬಲವೂ ಇದೆ. ಸಮಬಲದ ಹೆಜ್ಜೆ ಮರೆತುಹೋಗಿದೆ.
ಸಾಗಿ ಬಂದ ಹೆಜ್ಜೆಗಳ ಹಾದಿ ಮರೆಯಬಾರದು, ದೀರ್ಘ ಕಾಲ ಹಿಡಿದರೂ ಇತಿಹಾಸ ಮರುಕಳಿಸಲೇಬೇಕು. ರಾಜಕೀಯ ನಂಬಿದರೆ ಕಾಲಚಕ್ರ ಅರ್ಧಕ್ಕೇ ಹಿಮ್ಮುಖ ತಿರುಗಲಿದೆ.
ಕುದ್ರೋಳಿ ಕ್ಷೇತ್ರದ ನೇತೃತ್ವದಲ್ಲಿ ಮಂಗಳೂರು ದಸರಾ ಸಂಪನ್ನವಾಗುತ್ತಿದೆ. ಹನಿಮಳೆಯ ಶುಭಶಕುನದೊಂದಿಗೆ.
ಮತ್ತೆ ಹೊಸ ರಾಜಕಾರಣಕ್ಕೆ ಸನ್ನದ್ಧವಾಗುತ್ತಿದೆ..