ಮಂಗಳೂರು ದಸರಾ ಅದ್ಧೂರಿ ಶೋಭಾಯಾತ್ರೆಗೆ ಕ್ಷಣಗಣನೆ

ಮಂಗಳೂರು ದಸರಾ ಅದ್ಧೂರಿ ಶೋಭಾಯಾತ್ರೆಗೆ ಕ್ಷಣಗಣನೆ

ವರ್ಷಂಪ್ರತಿಯಂತೆ ಮತ್ತೆ ಮಂಗಳೂರು ದಸರಾ ಸಡಗರದ ದಿನ ಬಂದಿದೆ. ಇಂದು ಭಾನುವಾರ ಸಂಜೆ- ರಾತ್ರಿ ಮಂಗಳೂರಿನ ರಾಜಬೀದಿಗಳಲ್ಲಿ ವೈಭವದ ಶೋಭಾಯಾತ್ರೆಗೆ ಕ್ಷಣಗಣನೆ ಆರಂಭವಾಗಿದೆ.

ಕುದ್ರೋಳಿ ಗೋಕರ್ಣನಾಥ ದೇವಾಲಯದಿಂದ ಸಂಜೆ 4 ಗಂಟೆಗೆ ನಾರಾಯಣ ಗುರುಗಳು, ಗಣಪತಿ, ನವದುರ್ಗೆಯರ ಮೆರವಣಿಗೆ ಹೊರಡಲಿದೆ.

ಇದರೊಂದಿಗೆ ನಾಡಿನ ವಿವಿಧೆಡೆಗಳ ಕಲಾ ತಂಡಗಳ ಮೆರುಗು, ಭಿನ್ನ ವಿಭಿನ್ನ ಟ್ಯಾಬ್ಲೋಗಳನ್ನು ನೋಡಲು ತಂಡೋಪತಂಡವಾಗಿ ಜನ ಆಗಮಿಸಲಿದ್ದಾರೆ.

ಕರಾವಳಿ ಮಾತ್ರವಲ್ಲ, ದೇಶ ವಿದೇಶಗಳಿಂದ ಪ್ರವಾಸಿಗರನ್ನು ಮಂಗಳೂರು ದಸರಾ ಸೆಳೆಯುತ್ತಿದೆ.

ರಾತ್ರಿಯಲ್ಲಿ ಬೆಳಕಿನ ವೈಭವದ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ.

ದಸರಾ ಹಬ್ಬದ ಸಡಗರ ಒಂದೆಡೆಯಾದರೆ, ಬಹುಕೋಟಿ ಮೊತ್ತದ ವ್ಯಾಪಾರ ವಹಿವಾಟು ನಡೆಯುವ ಮೂಲಕ ಇದು ಸಹಸ್ರಾರು ಕುಟುಂಬಗಳ ಬದುಕಿಗೆ ಆಸರೆಯೂ ಆಗಿದೆ. 

Ads on article

Advertise in articles 1

advertising articles 2

Advertise under the article