
ಕುಡ್ಲಕ್ಕೆ ಬಂದ್ರು ಸಂಜಯ್ ದತ್, ಜತೆಗೇ ಇತ್ತು ಕುಡ್ಲದ ಪೊಲಿಟಿಕ್ಸ್!
ಕುಡ್ಲಕ್ಕೆ ಬಂದ್ರು ಸಂಜಯ್ ದತ್, ಜತೆಗೇ ಇತ್ತು ಕುಡ್ಲದ ಪೊಲಿಟಿಕ್ಸ್!
ಕುಡ್ಲ ಪೊಲಿಟಿಕ್ಸ್: ಬಾಲಿವುಡ್ ನಟ ಸಂಜಯ್ ದತ್ ಯಾರಿಗೆ ಗೊತ್ತಿಲ್ಲ? ಕಪ್ಪು ಗಡ್ಡಧಾರಿಯಾಗಿ ಕಪ್ಪು ಜುಬ್ಬಾ ಪೈಜಾಮ ಧರಿಸಿ ಕುಡ್ಲ ಸಿಟಿಗೆ ಶನಿವಾರ ಬಂದಿದ್ದರು. ಜತೆಗೆ ಕುಡ್ಲದ ಪೊಲಿಟೀಶಿಯನ್ಸು!
ಸಂಜಯ್ ದತ್ ಬಂದಿರೋದು ಬಿರುವೆರ್ ಕುಡ್ಲ ಸಂಘಟನೆಯ ಹುಲಿವೇಷದ ಊದುಪೂಜೆಗೆ. ಅಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಸುನಿಲ್ ಕುಮಾರ್, ಇನ್ನು ಕಾಂಗ್ರೆಸ್ ನಾಯಕರಾದ ಪದ್ಮರಾಜ್ ಆರ್. ಮತ್ತು ಸ್ಪೀಕರ್ ಖಾದರ್ ಅವರ ಸಹೋದರ ಇಫ್ತಿಕರ್ ಅಲಿ ಕೂಡ ಇದ್ದರು.
ಅಂದ ಹಾಗೆ ಸಂಜಯ್ ದತ್‌ರನ್ನು ಕರೆದದ್ದು ಬಿರುವೆರ್ ಕುಡ್ಲ ಎಂಬ "ಪವರ್‌ಫುಲ್" ಸಂಘಟನೆಯ ಉದಯ ಪೂಜಾರಿ. ಈ ಬಿರುವೆರ್ ಕುಡ್ಲಕ್ಕೂ, ಕುಡ್ಲದ ರಾಜಕಾರಣಿಗಳಿಗೂ ಬಹಳ ನಂಟು ಉಂಟಪ್ಪ.ಅದೇನೆಂದು ಕಾರಣ ಮಾತ್ರ ಕೇಳಬೇಡಿ?
ಸಂಜಯ್ ದತ್ ಅವರಿಗೆ ಹುಲಿ ವೇಷದ ಮುಖವಾಡವನ್ನು ಎಲ್ಲರೂ ಸೇರಿ ನೀಡಿದರು. ದತ್ ಕೂಡ ಖುಷಿಪಟ್ಟರು. ಕಾಲಿಡಲು ಜಾಗವಿಲ್ಲದಷ್ಟು ಫ್ಯಾನ್ಸ್ ತುಂಬಿಹೋಗಿದ್ದರು. ಕುಡ್ಲದ ಪೊಲಿಟಿಕ್ಸ್‌ನ ಕಾಳ ಹೆಜ್ಜೆಯ ಅಚ್ಚು ಮಾತ್ರ ಇತಿಹಾಸದ ಪುಟದಲ್ಲಿ ದಾಖಲಾಯಿತು.