ದೇಶದ ಬ್ಯಾಂಕ್‌ಗಳಲ್ಲಿ ಒಂದು ಲಕ್ಷ ಹುದ್ದೆ ಖಾಲಿ!

ದೇಶದ ಬ್ಯಾಂಕ್‌ಗಳಲ್ಲಿ ಒಂದು ಲಕ್ಷ ಹುದ್ದೆ ಖಾಲಿ!

- ಬ್ಯಾಂಕ್‌ಗಳಿಂದ 4 ಲಕ್ಷ ಕೋಟಿ ಸಾಲ ಪಡೆದು ವಂಚಿಸಿದ ಉದ್ಯಮಿಗಳು
- ಲಿಸ್ಟ್ ಬಿಡುಗಡೆ ಮಾಡಲು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ಆಗ್ರಹ

ಕುಡ್ಲ ನ್ಯೂಸ್:
ದೇಶದ ರಾಷ್ಟ್ರೀಕೃತ, ಖಾಸಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬರೋಬ್ಬರಿ ಒಂದು ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ!
ಈ ಮಾಹಿತಿ ನೀಡಿದ್ದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ರಾಷ್ಟ್ರೀಯ ಕಾರ್ಯದರ್ಶಿ ಸಿ.ಎಚ್. ವೆಂಕಟಾಚಲಮ್.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 75-80 ಸಾವಿರ ಹುದ್ದೆಗಳು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲೇ ಖಾಲಿ ಇವೆ. ಉಳಿದದ್ದು ಪ್ರೈವೇಟ್ ಬ್ಯಾಂಕ್‌ಗಳಲ್ಲಿವೆ. ಇಷ್ಟು ದೊಡ್ಡ ಸಂಖ್ಯೆಯ ಹುದ್ದೆಗಳು ಖಾಲಿ ಬಿದ್ದಿದ್ದರೂ ಭರ್ತಿ ಮಾಡದೆ ಔಟ್ ಸೋರ್ಸಿಂಗ್ ಮೂಲಕ 10-15 ಸಾವಿರ ಸಂಬಳಕ್ಕೆ ಉದ್ಯೋಗಿಗಳನ್ನು ತೆಗೆದುಕೊಳ್ಳಲಾಗ್ತಿದೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಭೀಕರವಾಗಿ ತಾಂಡವವಾಡುತ್ತಿರುವಾಗ ಹುದ್ದೆ ಭರ್ತಿ ಮಾಡಲು ಏನಡ್ಡಿ? ಒಂದು ಲಕ್ಷ ಹುದ್ದೆಗಳನ್ನು ಈ ಕೂಡಲೆ ಭರ್ತಿ ಮಾಡಬೇಕು ಎಂದು ವೆಂಕಟಾಚಲಮ್ ಒತ್ತಾಯಿಸಿದರು.
ಈ ಕುರಿತು ರಾಷ್ಟ್ರ ಮಟ್ಟದಲ್ಲಿ ಪ್ರತಿಭಟನೆ ಆಯೋಜಿಸುವುದಾಗಿ ಎಚ್ಚರಿಸಿದರು.

ಗ್ರಾಹಕರ ಮೇಲೆ ಸೇವಾ ಶುಲ್ಕ ಹೊರೆ:
ಹಿಂದೆ ಬ್ಯಾಂಕ್ ಸೇವಾ ಶುಲ್ಕಗಳು ಫ್ರೀ ಇತ್ತು, ಈಗ ವಿಪರೀತ ಏರಿಸಿದ್ದಾರೆ. ಇದರಿಂದ ಬಡವರಿಗೆ ಹೊರೆ ಆಗ್ತಿದೆ. ಕಾರ್ಪೊರೇಟ್ ಸಂಸ್ಥೆಗಳು ಪಡೆದ ಸಾಲ ಹಿಂತಿರುಗಿಸದೆ ಬ್ಯಾಂಕ್‌ಗಳ ಆದಾಯ ಕಡಿಮೆ ಆಗಿದೆ. ಹಾಗಾಗಿ ಸೇವಾ ಶುಲ್ಕ ಏರಿಸಿದ್ದಾರೆ ಎಂದವರು ಹೇಳಿದರು.
ಮೊದಲು ದೊಡ್ಡ ಸಂಸ್ಥೆಗಳ ಸಾಲ ವಸೂಲಿ ಮಾಡಬೇಕು, ಸಾಲ ಮರುಪಾವತಿ ಮಾಡುವಷ್ಟು ಹಣ ಅವರಲ್ಲಿದೆ, ಈಗಲೂ ದೇಶ ವಿದೇಶಗಳಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಎಂದು ವೆಂಕಟಾಚಲಮ್ ಆರೋಪ ಮಾಡಿದರು.

4 ಲಕ್ಷ ಕೋಟಿ ಸಾಲ ಬಾಕಿ!:
ದೇಶದ ಬ್ಯಾಂಕ್‌ಗಳಲ್ಲಿ 4 ಲಕ್ಷ ಕೋಟಿ ಕಾರ್ಪೊರೇಟ್ ಸಂಸ್ಥೆಗಳ ಸಾಲ ಬಾಕಿ ಇದೆ. ಇಂತಹ ಶ್ರೀಮಂತರಿಗೆ ವಿನಾಯ್ತಿ ನೀಡೋದಕ್ಕಾಗಿ ಬಡವರ ಮೇಲೆ ಹೊರೆ ಹಾಕೋದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ವಂಚಿಸಿದವರ ಲಿಸ್ಟ್ ಕೊಡಿ:
ಸಾಲ ಮರುಪಾವತಿ ಮಾಡದವರಲ್ಲಿ ಅದಾನಿ, ಅಂಬಾನಿ, ಮಲ್ಯನಂಥ ಹಲವರಿದ್ದಾರೆ. ದೇಶಕ್ಕೆ ವಂಚನೆ ಮಾಡಿದ ಇಂಥವರ ಲಿಸ್ಟ್ ಬಿಡುಗಡೆ ಮಾಡಬೇಕು ಎಂದು ವೆಂಕಟಾಚಲಮ್ ಆಗ್ರಹಿಸಿದರು.

Ads on article

Advertise in articles 1

advertising articles 2

Advertise under the article